ಮಂಗಳವಾರ, ಡಿಸೆಂಬರ್ 28, 2010

ಲವ್ವು ಇಷ್ಟೇನೆ

ಲವ್ವು ಇಷ್ಟೇನೆ
ಲವ್ವು ಇಷ್ಟೇನೆ ಕಾಲೇಜ್ ಮೆಟ್ಲು ಹತ್ತಿದ ಕೂಡ್ಲೇ ಹುಡುಗಿ ಇರಬೇಕು ಅನಿಸೋದು ಸಹಜ ಹಂಗೂ ಹಿಂಗೂ ಹುಡುಗಿ ಹುಡುಕೊಂಡು ಹಾಳಾಗ್ಹೋದೇ ಲವ್ವು ಇಷ್ಟೇನೆ.. ರಾತ್ರಿ ಹಗಲು ಒಂದೂ ತಿಳಿದೇ ಸಿಕ್ಕಾಗಲೆಲ್ಲ ಮಿಸ್ ಕಾಲ್ ಕೊಟ್ಟು ಮೆಸೇಜ್ ನಲ್ಲಿ ಕಿಸ್ಸು ಮಾಡೋ ಲವ್ವು ಇಷ್ಟೇನೆ ಅವ್ಳು ಕರೆದ್ಲು ಅಂತಾ ನಿಂದು ಪೆಟ್ರೋಲ್ ಗಾಗಿ ಜೇಬು ಖಾಲಿ ಮಾಡ್ಕೊಂಡು ಕೊನೆಗೆ ಅವಳ ಹಿಂದೆ ಅಲೆಯ ಬೇಕು ಲವ್ವು ಇಷ್ಟೇನೆ ಕಾಲೇಜ್ ಹುಡುಗ್ರು ಏನೂ ತಿಳಿದೇ ತಪ್ಪು ಮಾಡವ್ರೆ ಅವರೇನು ಮಾಡ್ತಾರೆ ಪಾಪ ಅವರ ವಯಸ್ಸು ಹಿಂಗೆನೆ ಅಪ್ಪ ಅಮ್ಮ ಹೇಳಿದ್ ಕೇಳ್ದೆ ಕಾಲೇಜ್ ಗೆ ಹೋಗ್ದೆ ಫಿಲಂ ಗೆ ಹೋಗಿ exam time ಲ್ಲಿ tention ಮಾಡ್ಕೊಳೋದು ಲವ್ವು ಇಷ್ಟೇನೆ bath room bed room ಎಲ್ಲಿ ಅಂದ್ರೆ ಅಲ್ಲಿ ಕುಳಿತು ಹುಡುಗಿ ಜೊತೆಗೆ chat ಮಾಡೋ ಲವ್ವು ಇಷ್ಟೇನೆ ಮಧ್ಯ ರಾತ್ರಿ ಆದ್ರೂ ಕೂಡ ಮಿಸ್ ಕಾಲ್ ಬರುತ್ತೆ ನೋಡು ನಿದ್ದೆ ಮಾಡ್ದೆ ಕಾಲ ತಳ್ಳೋ ಲವ್ವು ಇಷ್ಟೇನೆ ಲವ್ವು ಮಾಡೋದ್ ತಪ್ಪು ಅಂದ್ರೆ ಬಾಳೋದು ಹೇಗ್ಹೇಳಿ ಲವ್ವು ಮಾಡು ಹಾಳಾಗ್ ಬೇಡ ಅಂದ್ರೆ ok ನೇ ಊಟ ಬೇಡ ನಿದ್ದೆ ಬೇಡ ಅವಳ ನೆನಪೇ ಬಂದು ನೀನು week body ಆಗ್ತಿಯ ನೀನು ಲವ್ವು ಇಷ್ಟೇನೆ ಹುಡುಗಿ ಜೊತೆಗೆ ಜಗಳ ಮಾಡ್ಕೊಂಡ್ Bar ಗೆ ಹೋಗಿ ಬೀಯರ್ ಕುಡುಕೊಂಡು Pack ಗಟ್ಲೆ ಸಿಗರೇಟ್ ಸೇದ್ಕೊಂಡ್ ಫೀಲ್ ಆಗೋದೇ ಲವ್ವು ಇಷ್ಟೇನೆ ತಿಂಗ್ಳಿಗ್ ಎರೆಡು SIM ಕಾರ್ಡ್ ತಗೊಂಡು Daily ಎರೆಡ್ time Currency ಹಾಕ್ಸಿ ಗಂಟೆ ಗಟ್ಲೆ ಫೋನಿನಲ್ಲಿ ಮಾತಾಡೋ ಲವ್ವು ಇಷ್ಟೇನೆ ಅಪ್ಪ ಅಮ್ಮ ಕೊಟ್ಟ ಕಾಸು ಸಾಕಾಗ್ದೇನೆ ಖರ್ಚಿಗ್ ನಿಮಗೆ Part ಟೈಮ್ ಕೆಲಸ ಹುಡ್ಕೊಂಡು ಮಾಡೋ ಲವ್ವು ಇಷ್ಟೇನೆ ಸ್ವಂತ ದುಡಿದು ಬಾಳ್ತಿನ್ ಅಂತಾ ಚಲವು ನಮಗಿದ್ರೆ ಸಾವೇ ಬಂದ್ರೂ ಎದುರಿಸ್ತೀವಿ ಲವ್ವು ಇಷ್ಟೇನೆ

ಗುರುವಾರ, ಡಿಸೆಂಬರ್ 9, 2010

ಲವ್ ಯು ಗೆಳತಿ

ನೋಡುವ ನೋಟದ ಮೇಲಾಣೆ ಗೆಳತಿ ಸುಂದರ ಇರುಳ ಕನಸುಗಳ ಮೇಲಾಣೆ ಗೆಳತಿ ನೀನಿಲ್ಲಿದ ಬದುಕ ನಾ ಬಾಳಲಾರೆ ಗೆಳತಿ. ಜೀವದಲಿರುವ ಪ್ರತಿಯುಸಿರ ಮೇಲಾಣೆ ಗೆಳತಿ ನಾಡಿ ಹೊಡೆದುಕೊಳ್ಳುವ ಪ್ರತಿ ಬಡಿತದ ಮೇಲಾಣೆ ಗೆಳತಿ ಎನ್ನ ಬಾಳಲಿ ನೀನಿಲ್ಲದ ಪ್ರಪಂಚವ ಊಹೀಸಲೂ ಒಲ್ಲೆ ಗೆಳತಿ. ದೇಹದಲಿ ಹರಿವ ಎಲ್ಲಾ ನೆತ್ತರು ಕಣಗಳ ಮೇಲಾಣೆ ಗೆಳತಿ ನೀನೆ ತುಂಬಿ ಕುಳಿತಿರುವ ಎನ್ನ ಪುಟ್ಟ ಹೃದಯದ ಮೇಲಾಣೆ ಗೆಳತಿ ನಾ ಇತ್ತ ಮೇಲಿನ ಎಲ್ಲಾ ಆಣೆಗಳ ಮೇಲಾಣೆ ಗೆಳತಿ ಎನ್ನ ಪ್ರಾನಕಿಂತಲೂ ನೀನಿಷ್ಟ ಎನಗೆ, ನಂಬು, ಲವ್ ಯು ಗೆಳತಿ.

ಮಂಗಳವಾರ, ಡಿಸೆಂಬರ್ 7, 2010

ಬಾಳ ಗೆಳತಿಗೊಂದು ಕವನ

ಆ ಹುಣ್ಣಿಮೆ ರಾತ್ರಿಯದು ಬಲು ಸೊಗಸು│ ಅಂದು ನಾ ಕಂಡ ನನ್ನ ಅವಳ ಬಾಂಧವ್ಯದ ಮಧುರ ಸವಿಗನಸು│ ತನುಮನದಲ್ಲಿ ತಂದಿಹುದು ಬಗೆ ಬಗೆ ರೂಪದ ಹುಮ್ಮಸ್ಸು│ ಇಂದಾಗಿಹುದು ಅವಳ ಚೆಲುವಿನ ವರ್ಣನೆಯ ಕವನವಾಗಿ ಬರೆಯುವ ಮನಸು│ ಓ ಭಾವವೇ ನೀ ಅದಕ್ಕೆ ಸಹಕರಿಸು│ ನಿನ್ನೊಡಲಿನಿನ್ದ ಸುಲಲಿತ ಪದಗಳನು ಹೂಂಕರಿಸು│

ಕಂಫ್ಯೂಟರ್ ಇಂಜಿನಿಯರ್‌ಗಳ ಕನ್ನಡ ಸಿನಿಮಾ

ಕಂಫ್ಯೂಟರ್ ಇಂಜಿನಿಯರ್‌ಗಳು ಸಿನಿಮಾ ಮಾಡಿದರೆ, ಕನ್ನಡ ಸಿನಿಮಾಗಳ ಹೆಸರುಗಳು..... ಮುಸ್ಸಂಜೆ MOUSE ನಾನು ನನ್ನ WINDOWS ಭೂಲೋಕದಲ್ಲಿ BILLGATES ಬಂಗಾರದ DATA ನನ್ನ ಪ್ರೀತಿಯ RAM ಸೋಲಿಲ್ಲದ SERVER ನೀ ಬರೆದ C-PROGRAMME ಆಂಟಿ VIRUS ಕವಿರತ್ನ KEYBOARD ದಾಸ VIRUSಗಳು ಸಾರ್ VIRUSಗಳು XP-ಸಾಂಗ್ಲಿಯಾನ ಯಾರದೋ SOFTWARE ಎಲ್ಲಮ್ಮನ HARDWARE

ಐಟಿ ದೇವರುಗಳು

ಐಟಿ ದೇವರುಗಳು ಬ್ರಹ್ಮ : ಸಿಸ್ಟಮ್ ಇನ್‍ಸ್ಟಾಲರ್ ವಿಷ್ಣು : ಸಿಸ್ಟಮ್ ಸಫೋರ್ಟರ್ ಶಿವ : ಡಿಲೀಟ್ ಸ್ಪೆಷಲಿಷ್ಟ ನಾರದ : ಡಾಟಾ ಟ್ರಾನ್ಸ್‍ಫರರ್ ಅಪ್ಸರೆ : ಡೌನ್‍ಲೋಡ್ ವೈರಸ್

ಹಾಗೆ ಸುಮ್ಮನೆ

ಜೀವನದ ಸಾಗರದಲ್ಲಿ ಬಹಳಷ್ಟು ಗೆಳೆಯರು ನಿನಗೆ ಸಿಗಬಹುದು ನನಗಿಂತ ಸಾವಿರ ಒಳ್ಳೆಯವರು ಸಿಗಬಹುದು.. ಆ ಒಳ್ಳೆಯವರ ಗುಂಪಿನಲ್ಲಿ ನನ್ನನು ಮರೆಯಬೇಡ... ಯಾಕೆಂದರೆ ನಿನಗೆ ನಾನು ಮತ್ತೋಮ್ಮೆ ಸಿಗುವವನೇ...? ಜೀವನದ ಸಾಗರದಲ್ಲಿ ಬಹಳಷ್ಟು ಗೆಳೆಯರು ನಿನಗೆ ಸಿಗಬಹುದು ನನಗಿಂತ ಸಾವಿರ ಒಳ್ಳೆಯವರು ಸಿಗಬಹುದು.. ಆ ಒಳ್ಳೆಯವರ ಗುಂಪಿನಲ್ಲಿ ನನ್ನನು ಮರೆಯಬೇಡ... ಯಾಕೆಂದರೆ ನಿನಗೆ ನಾನು ಮತ್ತೋಮ್ಮೆ ಸಿಗುವವನೇ...? ವ್ಯಕ್ತಿಗಳು ಸಾಯಬಹುದು ಆದರೆ, ನೆನಪುಗಳಲ್ಲ ….... ಮೂಡ್ಸ್ ಬದಲಾಗಬಹುದು ಆದರೆ , ಮೇಂಟಾಲಿಟಿ ಅಲ್ಲ ……… ಸೃಷ್ಟಿಗಳು ಬದಲಾಗಬಹುದು ಆದರೆ , ಸೃಷ್ಟಿಶಿಲತೆ ಅಲ್ಲ ..... ಸಂಬಂಧ ಬದಲಾಗಬಹುದು ಆದರೆ, ಸ್ನೇಹವಲ್ಲ ……….. ನೀವು ಚೇಂಜ್ ಆಗಬಹುದು ಆದರೆ, ಈ "ಬಸವರಾಜ್ " ಅಲ್ಲ ………. ಈ ಸ್ನೇಹ ಹೀಗೆ ಇರಲಿ ಹಾಗೆ ಸುಮ್ಮನೆ

ಹೇಳಲಾಗದ ನೂರು ಭಾವ

ಹೇಳಲಾಗದ ನೂರು ಭಾವ ! ಹೇಳಿ ಕೊಳ್ಳಲಾಗದ ವೇದನೆ ! ಏನೋ ಅರಿಯೆ ! ಮನದಲಿ ! ಸಂಕಟ ! ಯಾಕೆ ಹೀಗಾಯ್ತೋ ? ಏನಾಯ್ತೋ ? ಅರಿವಿಲ್ಲ ! ಹಚ್ಚಿಕೊಂಡ ಬದುಕು ! ಕನಸಾಗಿದೆಯಲ್ಲ ! ಕಟ್ಟಿ ಕೊಂಡ ಕನಸು ! ಇನ್ನು ಕೂಡ ನನಸಾಗಿಲ್ಲ ! ಬದುಕು ಇಲ್ಲರಿಗೂ ಹೀಗೆನಾ ? ಅಥವಾ ನಮಗೆ ಮಾತ್ರ ಹೀಗೆನಾ ? ಒಪ್ಪಿಕೊಂಡ , ಹರಸಿಕೊಂಡ ಪ್ರೀತಿ ನಮದಾಗಲಿಲ್ಲ ! ನಂಬಿದವರು ನಮ್ಮ ನಂಬಿಕೆಯ ಉಳಿಸಿಕೊಳ್ಳಲಿಲ್ಲ ! ಅರಳಿದ ಪ್ರೀತಿ ! ಚಿಗುರುವ ಮುನ್ನ ಚಿವುಟಿದಿರಲ್ಲ ! ಅರಳಿದ ಹೂವು ! ಮುಡಿಗೆರುವ ಮುನ್ನ ಬಾಡಿಸಿದಿರಲ್ಲ ! ಎಷ್ಟೊಂದು ವಿಶ್ವಾಸ ನಂಬಿಕೆ ಪ್ರೀತಿಯಲಿ ! ಅದು ನೀಡಿದ ನೋವ ನಾ ಈಗ ಯಾರಿಗೆ ಹೇಳಲಿ ! ನಾವು ಹಚ್ಚಿಕೊಂಡವರು ! ನಮ್ಮ ನೆಚ್ಚಿ ಕೊಳ್ಳಲಿಲ್ಲ ! ನೆಚ್ಚಿಕೊಳ್ಳದೆ ಬಂದವರು ! ಬದುಕಾದರಲ್ಲ ! ಮನ ಮತ್ತೆ ಸಾವಿರ ಕನಸ ಕಟ್ಟುವುದು ತಪ್ಪಲಿಲ್ಲ ! ನಾ ಕಟ್ಟಿದ ಕನಸು ಎಂದು ನನಸಗುವುದೋ ಅರಿವಿಲ್ಲ ! ಹುಚ್ಚು ಮನ ! ಆ ಆಸೆಯೊಳಗೆ ಕಾಯುತಿದೆಯಲ್ಲ ! ಬರಬಹುದೇ ನನಗೂ ಒಂದಲ್ಲ ಒಂದಿನ ! ಗೊತ್ತಿಲ್ಲ ! ಪ್ರೀತಿಗಾಗಿ ! ದಿನ ಕಾಯುವುದು ತಪ್ಪಲಿಲ್ಲ ! ಏನ ಮಾಡಿದೆ ದೇವ ನಿನಗೆ ! ಅದರಲಿ ನನ್ನ ತಪ್ಪಿಲ್ಲ ! ಇಲ್ಲದ ! ಯೋಚನೆಯೊಳಗೆ ಮನ ಕೊರಗುತಿದೆಯಲ್ಲ ! ಬರಲಿ ! ಹಾಗೆಯೆ ! ಒಂದು ದಿನ ! ನನ್ನ ನಲಿವ್ಲಿಗೆ ! ನನ್ನ ಖುಷಿಗೆ ! ನಾನು ಕುಣಿದಾಡುವ ದಿನ ! ನನ್ನ ಪ್ರೀತಿ ನನ್ನನೋಪ್ಪಿಕೊಂಡ ದಿನ ! ಕಾಣುವೆ ಭುವಿಯಲಿ ! ಸ್ವರ್ಗವ ಆ ದಿನ !

ತಂಗಾಳಿ

ಮೆಲ್ಲಮೆಲ್ಲನೆ ಬೀಸುವ ತಂಗಾಳಿ ನನ್ನ ಗೆಳತಿಯ ಬಳಿಯಲೊಮ್ಮೆ ಸುಳಿದು ನೋಡುಅವಳಿಂದ ನೀನು ಮತ್ತಷ್ಟು ತಂಪಾದರು ಆಶ್ಚರ್ಯವಿಲ್ಲ ! ಭುವಿಯ ಸವಿಯ ಹೆಚ್ಚಿಸುವ ಮುದ್ದು ಮುದ್ದುಹೂವುಗಳೇ, ಒಂದೇ ಒಂದು ಸಲ ಇವಳನೆನಪು ಮಾಡಿಕೊಳ್ಳಿ, ಮಲಿನಗೊಂಡ ಮನಗಳಿಗೆಮತ್ತಷ್ಟು ಮುದ ನೀಡುವ ಸೌಂದರ್ಯ ನಿಮ್ಮದಾಗಬಹುದು ! ಬದುಕಿನ ಆಸೆಯನ್ನ ಹೊರಹೊಮ್ಮಿಸುವಸುಂದರ ಕವನಗಳೆ ಒಂದೇ ಒಂದು ಸಾರಿಇವಳ ಮೃದು ಹೃದಯದೊಳಿಳಿದು ಬನ್ನಿ, ಈ ಮಾಯಗಾತಿಯ ಮೈ ಸ್ಪರ್ಶದಿಂದಲಾದರು ನಿಮ್ಮ ಸಾಲುಗಳು ಇನ್ನೂ ಶ್ರೀಮಂತವಾದಾವು ! ರಾತ್ರಿ ಮಿನುಗುವ ಚಂದಮಾಮನೇಯಾಕಿಷ್ಟು ಕೆಂಪಾಗಿದ್ದಿ ತಂಪಾಗಿದ್ದಿ ?ಗೊತ್ತಾಯಿತು ಬಿಡು… ಇವಳು ನಿನ್ನ ಕನಸಲ್ಲಿ ಬಂದಿರಬೇಕು ! ನಕ್ಷತ್ರಗಳೇ ನಿಮಗೆ ಏನು ಅನ್ನಿಸುವುದಿಲ್ಲವೆ?ಈ ಮಲ್ಲಿಗೆಯ ಮಗಳಿಂದ ಅದೆಷ್ಟು ದೂರವಿದ್ದೀರಿ ! ಸುಮ್ಮನಿಳಿದು ಬಂದಿವಳ ಜೊತೆ ಜೊತೆಯಾಗಿಆಟವಾಡಿಕೊಂಡಿರಬಾರದೇನು ! ಇವಳೇನು ದೂರದವಳ?ನಿಮ್ಮ ಚಂದಮಾಮನ ತಂಗಿಯಲ್ಲವೇನು !

ಬರೆಯುತ್ತಲೇ ಕುಳಿತೆ

ಬರೆಯಲಾಗುತ್ತಿಲ್ಲ ನನಗೆ ಒಂದೂ ಕವಿತೆ ಏಕೆಂದರೆ ನನಗೆ ಕಲ್ಪನೆಯ ಕೊರತೆ ನಿನ್ನದೇ ನೆನಪಿನಲ್ಲಿ ನಾನಿಲ್ಲಿ ಕುಳಿತೆ ಪದಗಳನ್ನು ಹುಡುಕುತ್ತ ನಾನಿಲ್ಲಿಯೇ ಕೊಳೆತೆ......

ಗುರುವಾರ, ನವೆಂಬರ್ 25, 2010

ಮರೆಯದ ಮಾತುಗಳು

ಮರೆಯದ ಮಾತುಗಳು ಅದರೊಳಗೆ ಅರಿವಿಲ್ಲದೆ ಕಾಡುವ ನೆನಪುಗಳು ಎಂದೋ ಕಂಡ ಕನಸುಗಳು , ನನಸಾಗದೆ ನರಳುವ ಇರುಳುಗಳು ಆಡಿದ ಮಾತುಗಳು , ನುಡಿದ ಮುತ್ತುಗಳು ಕಂಡ ಕ್ಷಣ ಆ ಪಿಸು ಮಾತಿಗೆ ಪರಿತಪಿಸುವ ಮನಸುಗಳು ಕಾಣದೆ ಹೋದಾಗ ಹುಡುಕುವ ನಯನಗಳು ಅದರೊಳಗೆ ಹುಡುಕಿ ಕುಳಿತಿರುವ ಮಧುರ ಭಾವನೆಗಳು ಬೆನ್ನಟ್ಟಿ ಹೋದರೆ ಬಿಡಲಾರದ ತಲೆ ನೋವುಗಳು ಇಂತ ಹುಚ್ಚು ಪ್ರಪಂಚದೆ ಬದುಕುತಿರುವ ನಾವುಗಳು ಜಗದ ಪರಿವಿಲ್ಲದಂತೆ ಪ್ರೀತಿಸುವ ಪ್ರೇಮಿಗಳು ಅವರನು ಬಿಡದೆ ಕಾಡುವ ಕಾಮನೆಗಳು ಅದ ಮೆಟ್ಟಿ ನಿಲ್ಲಲು ಚಡಪಡಿಸುವ ಹೃದಯಗಳು ಗುರಿ ತಲುಪದೇ ಒದ್ದಾಡುವ ಮನಸುಗಳು ಹಗಲಿರುಳು ಬಿಡದಂಗೆ ಕಾಡುವ ಕನಸುಗಳು ಅದರ ನಡುವೆ ಬದುಕ ನಡೆಸುತಿರುವ ನಾವುಗಳು ಕೇಳಲೇ ಬೇಕ್ದದ ಪ್ರಶ್ನೆಗಳು , ಬರಲೇ ಬೇಕಾದ ಉತ್ತರಗಳು ಅದರ ನಡುವಿನಲ್ಲಿ ನಾವು ನುಡಿವ ಮಾತುಗಳುಬೇಕೆಂದಾಗ ಸಿಗದೇ ಹೋದ ಪ್ರಿಯತಮೆಯ ಮುತ್ತುಗಳು ಬೇಡವೆಂದರೂ ಮತ್ತೆ ಮತ್ತೆ ಕಾಡುವ ಆ ಇರುಳುಗಳು ಇದ್ದವರಿಗೆ ಸಿಗದೇ ಹೋಗುವ ಆ ಸವಲತ್ತುಗಳು ಬೇಡ ಎಂದವರಿಗೆ ಸಾಲಾಗಿ ಹುಟ್ಟುವ ಆ ಮಕ್ಕಳುಗಳು ಬೇಕು ಎಂದವರಿಗೆ ಸಿಗದೇ ಸುತ್ತುವ ಮಂದಿರ ಮಸೀದಿಗಳುಆಸೆ ಹುಟ್ಟಿಸಿ ನಿರಾಸೆ ಮಾಡುವ ಆಸ್ಪತ್ರೆಗಳು ಇವುಗಳ ನಡುವೆ ಬದುಕಲು ಮೈ ಮಾರಿಕೊಳ್ಳುವ ಜನಗಳು ಹಣದಾಸೆಗೆ ಅದಿಕಾರದ ಆಸೆಗೆ ಮಾಡಿಸುವ ಕೊಲೆಗಳು ಅನಾಮಿಕರನ್ನು ಸುಲಭವಾಗಿ ನಂಬುವ ನಾವುಗಳು ಅಂದುಕೊಂಡು ನೊಂದಿಕೊಂಡು ಕೇಳಿ ಕೊಂಡ ಪ್ರಶ್ನೆಗಳು ! ಲೈಫು ಇಷ್ಟೇನೆ ! ಇದು ನನ್ನ ಸ್ನೇಹಿತರಾದ ಕರುಣಾ ಸೋನು ಅವರು ಕಳಿಸಿದ ಕವನ

ಬುಧವಾರ, ನವೆಂಬರ್ 24, 2010

ನಗುವುದೇ ಸ್ವರ್ಗ

ಹೆಂಡತಿ : ರೀ..... ಅಂಗಡಿಗೆ ಹೋಗಿ ಒಂದು ಕೆ.ಜಿ. ಸಕ್ಕರೆ ತನ್ನಿ....

ಗಂಡ : ನಿನ್ನ ತುಟಿಯಲ್ಲಿ ಅಷ್ಟು ಸಕ್ಕರೆ ಇರೋವಾಗ ಬೇರೆ ಸಕ್ಕರೆ ಬೇಕೇನೆ ?

ಹೆಂಡತಿ : ನಿಮ್ಗೆ ಓಕೆ, ಆದ್ರೆ ನಿಮ್ಮ ಫ್ರೆಂಡ್ಸ್ ಬಂದ್ರೆ ???

********************************************

ಗಂಡ : ಪಕ್ಕದ ಮನೆಯವರು ಅವರ ಗಂಡನ ತಿಥಿಗೆ ಕರೆದಿದ್ದಾರೆ, ನೀನು ಹೋಗಿ ಬಾ.

ಹೆಂಡತಿ : ನಾನು ಹೋಗಲ್ಲ. ನಾನು ಒಮ್ಮೆಯಾದರೂ ನನ್ನ ಗಂಡನ ತಿಥಿಗೆ ಅವರನ್ನು ಕರೆಯಲಿಲ್ಲ. ನಾನು ಹ್ಯಾಗೆ ಹೋಗುವುದು?

**************************************************************************

ಹೆಂಡತಿ: ರೀ.... ಒಂದು ವಿಷಯ ಹೇಳ್ತೀನಿ, ಹೊಡೆಯೋದಿಲ್ಲ ಅಂತ ಮಾತು ಕೊಡಿ?

ಗಂಡ: ಎನೇ ಹೀಗೆ ಹೇಳ್ತೀಯಾ, ನಾನು ನಿಂಗೆ ಯಾವಾತ್ತಾದ್ರೂ ಹೊಡ್ದಿದ್ದೀನಾ, ಹೇಳು ಏನು ವಿಷಯ?

ಹೆಂಡತಿ: ನಂಗೀಗ ಮೂರು ತಿಂಗ್ಳು !

ಗಂಡ: ಇದು ಖುಷಿಯ ವಿಷಯ ಕಣೇ, ಇದಕ್ಕೆಲ್ಲ ಯಾವ ಗಂಡ ಹೆಂಡತಿಗೆ ಹೊಡೀತಾನೆ?

ಹೆಂಡತಿ: ಕಾಲೇಜ್‍ನಲ್ಲಿದ್ದಾಗ ಅಪ್ಪಂಗೆ ಹೀಗೆ ವಿಷಯ ಹೇಳಿದ್ದೆ, ಆವಾಗ ಅಪ್ಪ ತುಂಬಾ ಹೊಡ್ದಿದ್ರು !!!

**************************************************************************

ರಾಮ : ಲೋ ಶಾಮ ನೆನ್ನೆ ನನ್ನ ಹೆಂಡತಿಯ ಕಣ್ಣಿಗೆ ಕಸ ಬಿದ್ಧು ೫೦೦ ರೂ ಕರ್ಚಾಯಿತು ಕಣೋ ??? ಶಾಮ : ಅಯ್ಯೌ ಅಷ್ಟೇನ ನೆನ್ನೆ ನನ್ನ ಹೆಂಡತಿಯ ಕಣ್ಣಿಗೆ ಸೀರೆ ಬಿದ್ಧು ೫೦೦೦ ಖರ್ಚಾಯಿತು. !!!

**************************************************************************

ರಾತ್ರಿ ಕರೆಂಟು ಹೋಗಿತ್ತು !

ಆಗ ಮಂಕ ಹೆಂಡತಿಗೆ ಹೇಳಿದ : ಲೇ ಫ್ಯಾನ್ ಆದ್ರೂ ಹಾಕೆ.......... !!!

ಮಂಕಿ : ಆಡಿದ್ರಲ್ಲ ಮಂಕುತನದ ಮಾತು ! ಫ್ಯಾನ್ ಹಾಕಿದ್ರೆ ಕ್ಯಾಂಡಲ್ ಆರಿಹೋಗಲ್ವ ? ? ?

**************************************************************************

ರಾಮು : ಏನಮ್ಮ ನಿನ್ನ ಗಂಡ ಚೆನ್ನಾಗಿದ್ದಾನ?

ಮೀನಾಕ್ಷಿ : ಏನ್ ಸ್ವಾಮಿ ಏಕವಚನದಲ್ಲಿ ಮಾತನಾಡಿಸ್ತಿರಿ.

ರಾಮು : ಓಹ್, ಏನಮ್ಮ ನಿನ್ನ ಗಂಡಂದಿರೆಲ್ಲಾ ಚೆನ್ನಾಗಿದ್ದಾರ ???

ಹುಡುಗಿ ಪ್ರೀತಿಸುತ್ತಾಳೆ.....

ಹುಡುಗಿ ಪ್ರೀತಿಸುತ್ತಾಳೆ.....

ಶ್ರೀಮಂತನ ಸೊಕ್ಕಿನಿಂದ ಉಬ್ಬಿ ನಿಂತ ಪರ್ಸ್ ಅನ್ನು ನಮ್ಮೂರ ಕರಿಯನ ಬತ್ತಲೆದೆಯಲ್ಲಿ ಅವನ ಮಕ್ಕಳು ಸುರಿಸಿದ ಕಣ್ಣೀರು ರಕ್ತವಾಗಿ ಹೆಪ್ಪುಗಟ್ಟಿದುದರ ಅರಿವಿಲ್ಲ ಅವಳಿಗೆ.....

ಹುಡುಗಿ ಪ್ರೀತಿಸುತ್ತಾಳೆ.....

ಹೊಂಡಾ ಸುಜುಕಿಗಳ ಸರದಾರರನ್ನು ,ತಮ್ಮದೇ ಲೋಕದಲ್ಲಿ ವಿಹರಿಸುವ ಸಾಫ್ಟವೇರ್ ಎಡಿಕ್ಟ್ ರನ್ನು ಚಪ್ಪಲಿಯಿಲ್ಲದೇ ಕಾಲೆಳೆಯುತ್ತ ಸಾಗಿದವ ಕಾಣುವುದಿಲ್ಲ ಅವಳಿಗೆ.....

ಹುಡುಗಿ ಪ್ರೀತಿಸುತ್ತಾಳೆ.....

ಟಿವಿ, ಫ್ರಿಜ್,ಮೊಬೈಲ್ ಗಳ ಕ್ರುತಕತೆ ಯನ್ನು ಆಭರಣಗಳ ಆಡಂಬರವನ್ನು.. ಈ ಮಣ್ಣ ಕಣಕಣವೂ ಬಡವನ ಎದೆಯಲ್ಲಿ ಪ್ರೀತಿಯಾಗಿ ಹಸಿರಾದುದರ ಅರಿವಿಲ್ಲ ಅವಳಿಗೆ....

ಹುಡುಗಿ ಪ್ರೀತಿಸುತ್ತಾಳೆ....

ಡೋನೆಶನ್ ಪೋಶಿತ ಡಾಕ್ಟರ್, ಇಂಜಿನೀಯರ್ ಲಂಚವಂತ ಪಿ ಎಸ್ ಐ ಗಳನ್ನು.... ಕೊಡಲು ಫೀಸಿಲ್ಲದೆ ಮುಸುರೆ ತೊಳೆಯುವವ ಪಾಪ ಕಾಣುವುದಿಲ್ಲ ಅವಳಿಗೆ....

ಹುಡುಗಿ ಪ್ರೀತಿಸುತ್ತಾಳೆ...... ಈಗಿನ ಹುಡುಗಿಯರು ಪ್ರೀತಿಸುವುದೇ ಹೀಗೆ......!

ಕಾಣದ ಗೆಳತಿಗಾಗಿ ಬರೆದಿರುವೆ ಈ ಕವನ

ಕಾಣದ ಗೆಳತಿಯೆ ಕೇಳೆ ನಿನಗಾಗಿ ಬರೆದಿರುವೆ ಈ ಕವನ ಕಾಣೆನೆ೦ಬ ಕಾರಣಕ್ಕೆ ಮರೆಯದಿರು ನೀ ನನ್ನ ಮನಬಿಚ್ಚಿ ಹೇಳುತೀನಿ ಕಿವಿಗೊಟ್ಟು ಕೇಳುತೀಯ ನಾನೊಬ್ಬ ಭಾವಜೀವಿ ಜೊತೆ-ಜೊತೆಗೆ ಸ್ನೇಹ ಜೀವಿ ಭಾವನೆಗಳ ಲೋಕದಲಿ ಕನಸಿನ ಕಾಮನಬಿಲ್ಲಿನ ಮೇಲೆ ನನ್ನ ಬದುಕು ನೀ ಸ್ನೇಹ ಜೀವಿಯಾದರೆ ಕಳಿಸೆನ್ನ ಲೋಕಕೊ೦ದು ನಿನ್ನ ನೆನಪು ಮನಸು ಬಿಚ್ಚಿ ನಾ ನುಡಿವೆ ನನ್ನ ಭಾವನೆ ನೂರು ಸವಿನೆನಪಲ್ಲೆ ಕಟ್ಟಿಕೊಡುವೆ ಸ್ನೇಹವೆ೦ಬ ತೇರು ತೆರೆದ ಹೃದಯದಲಿ ನಿನಗಾಗಿ ಬರೆದಿರುವೆ ಈ ಓಲೆ ಮನಸಿಟ್ಟು ಪ್ರೀತಿಯಿ೦ದ ನೀನಿದನು ಓದು ಬಾಲೆ ನಿನಗಿಷ್ಟವಾದರೆ ಈ ಕವನ, ನಿನಗಿದೊ ನನ್ನ ಕೋಟಿ ನಮನ... ................ಇಂತಿ ನಿಮ್ಮ ಪ್ರೀತಿಯ ಸ್ನೇಹಿತ

ಈ ಲೈಫ್ ಇಷ್ಟೇನೆ...

ಗಡಿ ಬಿಡಿ ಗಜಿ ಬಿಜಿ ಓ ಓ ಓ ಈ ಲೈಫ್ ಇಷ್ಟೇನೆ... ಬೆಳಿಗ್ಗೆ ಎದ್ದು ಸ್ನಾನ ಮಾಡ್ಕೊಂಡ್ ಅರ್ಧಂಬರ್ಧ ಇಸ್ತ್ರಿ ಹಾಕ್ಕೊಂಡ್ ಕಷ್ಟಪಟ್ಟು ಆಫೀಸ್ ಸೇರೋ ಲೈಫ್ ಇಷ್ಟೇನೆ... ಕ್ಯಾಂಟೀನ್ ಹೋದ್ರೂ ಹುಡ್ಗೀರ್ ನೋಟ ಸೀಟ್ ಗೆ ಬಂದ್ರೂ ಮ್ಯಾನೇಜರ್ ಕಾಟ ಕದ್ದು ಮುಚ್ಚಿ youtube ನೋಡೋ ಲೈಫ್ ಇಷ್ಟೇನೆ... ಆಫೀಸ್ ನಲ್ಲಿ ಒತ್ಲಾ ಹೊಡೆದು ಮೀಟಿಂಗ್ ನಲ್ಲಿ ಭಾಶ್ಣ ಬಿಗ್ದು ಮ್ಯಾನೇಜರ್ ಕಣ್ಣಿಗೆ ಮಣ್ಣು ಹಾಕೋ ಲೈಫ್ ಇಷ್ಟೇನೆ... ಮ್ಯಾಂವ್ ಮ್ಯಾಂ ಮ್ಯಾಂವ್ ಮ್ಯಾವ್ ಮ್ಯಾಂವ್ ನಾನು ತುಂಬಾ ಒಳ್ಳೆಯವನು ಸ್ವಲ್ಪ ಹಂಗೆನೆ ಕೆಲ್ಸಾ ಮಾಡಿ ಬದುಕೋ ಲೈಫ್ ಸ್ವಲ್ಪ ಕಷ್ಟಾನೆ !! ಹರುಕು ಮುರುಕು ಹಾಸಿಗೆ ಚಾಚಿ ನಾತ ಹೊಡೆಯೋ ರಗ್ಗು ಬಾಚಿ ತಣ್ಣಗೆ ಗಾಳೀಲಿ ಬೆಚ್ಚಗೆ ಮಲಗೊ ಲೈಫ್ ಇಷ್ಟೇನೆ.... ಅಂತೂ ಇಂತು ದಿನಗಳು ಕಳೆದು ವೀಕೆಂಡ್ ಬಂದ್ರೆ ninety ಹೊಡೆದು ಮಲ್ಯ ಸಾಹೇಬ್ರಗೆ ಸಲಾಮು ಹಾಕೋ ಲೈಫ್ ಇಷ್ಟೇನೆ.... ಹೇಳೋರು ಕೇಳೋರು ಯಾರು ಇಲ್ಲ ಪ್ರಾಯ ಹೋದ್ರೂ partner ಇಲ್ಲ ನನ್ನೀ ಜೀವಕೆ ನಾನೇ ಎಲ್ಲ ಲೈಫ್ ಇಷ್ಟೇನೆ.... ಪಾಂವ್ ಪ ಪಾವ್ ಪಾಂವ್ ಪಾಂವ್ ನಾವು ಎಲ್ಲ ಬ್ಯಾಚುಲರ್ಸ್.. ಸ್ವಲ್ಪ ಹಂಗೆನೆ ತಂದೆ ತಾಯಿ ಬಿಟ್ಟು ಬದುಕೋ ಈ ಲೈಫ್ ಇಷ್ಟೇನೆ..... ಈ ಲೈಫ್ ಇಷ್ಟೇನೆ..... ಈ ಲೈಫ್ ಇಷ್ಟೇನೆ..... ಸ್ಕ್ರಿಪ್ಟ್ ಸ್ಟೋರಿ ಯಾರಿಗೆ ಬೇಕು ಎರಡೂವರೆ ಗಂಟೆ ಬೊಂಬಡ ಬಾರ್ಸು ಟೈಮ್ ಪಾಸ್ ಸಿನಿಮಾ ಹಿಟ್ಟು ಫಿಲ್ಸ್ಮ್ಸ್ ಮ್ ಇಷ್ಟ್ಣೆ ಪಂಚರಂಗಿ ಪೊಂ ಪೊಂ